ಜೆರ್ನೈಕ್, ಫ್ರಿಟ್ಸ್
1888-1966. ಡಚ್ ಭೌತವಿe್ಞÁನಿ. ಬೆಳಕಿನ ಶಾಸ್ತ್ರದಲ್ಲಿ ಮಾಡಿದ ಪ್ರಮುಖ ಸಂಶೋಧನೆಗಳಿಗಾಗಿ ಈತನಿಗೆ 1953ರಲ್ಲಿ ಭೌತ ಶಾಸ್ತ್ರದ ನೊಬೆಲ್ ಪಾರಿತೋಷಿಕ ಲಭಿಸಿತು. ಜನನ 1888 ಜುಲೈ 16ರಂದು ಆ್ಯಮ್‍ಸ್ಟರ್ ಡ್ಯಾಮಿನಲ್ಲಿ. ತಂದೆತಾಯಿಯರಿಬ್ಬರೂ ಗಣಿತಶಾಸ್ತ್ರದ ಅಧ್ಯಾಪಕರಾಗಿದ್ದರು. ಆ್ಯಮ್‍ಸ್ಟರ್‍ಡ್ಯಾಮ್ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರವನ್ನು ಅಧ್ಯಯಿಸಿದ. 1915ರಲ್ಲಿ ಡಾಕ್ಟರೇಟ್ ಪದವಿ ಪಡೆದು ಗ್ರಾನಿಂಗೆನ್ ವಿಶ್ವವಿದ್ಯಾಲಯದಲ್ಲಿ ಮೊದಲು ಗಣಿತೀಯ ಭೌತವಿe್ಞÁನದ ವಿಶೇಷ ಪ್ರಾಧ್ಯಾಪಕನಾಗಿಯೂ (1915) ಮತ್ತೆ ಪೂರ್ಣ ಪ್ರಾಧ್ಯಾಪಕನಾಗಿಯೂ (1920) ಸೇವೆ ಸಲ್ಲಿಸಿದ.

	ದ್ರವ ಮತ್ತು ಅನಿಲಗಳ ಮಧ್ಯೆ ಕಾಣಬರುವ ಸಂಧಿಸ್ಥ ಬಿಂದುವಿನ ಸಮೀಪ ಉಂಟಾಗುವ ಸಂಧಿಸ್ಥ ಅರ್ಧಪಾರದೀಪ್ತಿ ತತ್ತ್ವದ (ಪ್ರಿನ್ಸಿಪಲ್ ಆರ್ಫ ಕ್ರಿಟಕಲ್ ಓಪಲೆಸೆನ್ಸ್) ಬಗ್ಗೆ ಸಂಶೋಧಿಸಿದ. ಆರ್ನ್‍ಸ್ಟೇನ್ ಎಂಬ ವಿe್ಞÁನಿಯೊಡಗೂಡಿ, ಈಗ ಭೌತಶಾಸ್ತ್ರಜ್ಞರಿಗೆಲ್ಲರಿಗೂ ಪರಿಚಿತವಾಗಿರುವ, ಆರ್ನ್‍ಸ್ಟೇನ್-ಜೆರ್ನೈಕ್ ನಿಯಮವನ್ನು ಪ್ರತಿಪಾದಿಸಿದ. ಬೆಳಕಿನ ಶಾಸ್ತ್ರದಲ್ಲಿ ಸಂಶೋಧನೆ ಪ್ರಾರಂಭಿಸಿ ದೂರದರ್ಶಕ ಯಂತ್ರ ದರ್ಪಣಗಳನ್ನು ರೂಪಿಸುವುದರಲ್ಲಿ ಉಪಯೋಗಿಸುವ ಫೋಕೋ ಚೂರಿ-ಏಣು ಪರೀಕ್ಷೆ (ಫೊಕೋ ನೈಫ್-ಎಡ್ಜ್ ಟೆಸ್ಟ) ಎಂಬ ವಿಷಯದ ಬಗ್ಗೆ ತಾತ್ತ್ವಿಕ ವಿಶ್ಲೇಷಣೆ ನಡೆಸಿದ (1934). ಪರಿಣಾಮವಾಗಿ ಪ್ರಾವಸ್ಥಾ ವೈದೃಶ್ಯ (ಫೇಸ್ ಕಾಂಟ್ರಾಸ್ಟ್) ತತ್ತ್ವವನ್ನು ಮನಗಂಡು ಇದರ ಆಧಾರದ ಮೇಲೆ ಹೊಸ ಸೂಕ್ಷ್ಮ ದರ್ಶಕವನ್ನು ಉಪಜ್ಞಸಿದ, ಜೀವಶಾಸ್ತ್ರ ಸಂಶೋಧನೆಯಲ್ಲಿ ಈ ಉಪಜ್ಞೆಗೆ ವಿಶೇಷ ಪ್ರಾಮುಖ್ಯ ಉಂಟು.

	ಪ್ರಾವಸ್ಥು ವೈದೃಶ್ಯವನ್ನು ಅರಿತುಕೊಳ್ಳಲು ಸಾಮಾನ್ಯವಾಗಿ ಸೂಕ್ಷ್ಮ ದರ್ಶಕದಲ್ಲಿ ವಸ್ತುಗಳು ಗೋಚರಿಸುವ ವಿಧಾನವನ್ನು ವಿಶ್ಲೇಷಿಸಬೇಕಾಗುತ್ತದೆ. 19ನೆಯ ಶತಮಾನದ ಕೊನೆಯ ಭಾಗದಲ್ಲೇ ಇದರ ಬಗ್ಗೆ ಅಬ್ಬೆ ಎಂಬ ಪ್ರಸಿದ್ದ ವಿe್ಞÁನಿ ವಿಮರ್ಶೆ ಮಾಡಿದ್ದ. ಈತ ತಿಳಿದಿರುವಂತೆ ಬೆಳೆಕು ವಿದ್ಯುದ್ಕಾಂತೀಯ ಅಲೆಗಳಿಂದ ಕೂಡಿದ ಸೂಕ್ಷ್ಮವಸ್ತುವೊಂದನ್ನು ಸೂಕ್ಷ್ಮದರ್ಶಕದ ಫಲಕದಲ್ಲಿಟ್ಟಾಗ ಅದು ಬೆಳಕಿನ ಅಲೆಗಳನ್ನು ನಮನ (ಡಿಫ್ರ್ಯಾಕ್ಷನ್) ಮಾಡುತ್ತದೆ. ಇದರಿಂದಾಗಿ ಸೂಕ್ಷ್ಮ ದರ್ಶಕದ ವಸ್ತುಮಸೂರದ (ಆಬ್ಜಕ್ಟ್ ಲೆನ್ಸ್) ಹಿಂಬದಿಯಲ್ಲಿ (ಸಾಮಾನ್ಯವಾಗಿ ಮಧ್ಯಭಾಗದಲ್ಲಿ) ಮೂಡುವ ಮತ್ತು ನೇರವಾಗಿ ಬರುವ (ಎಂದರ ನಮನಕ್ಕೆ ಒಳಗಾಗದ) ಕಿರಣಗಳಿಂದ ಉಂಟಾಗುವ ಬಿಂಬವೊಂದೇ ಅಲ್ಲದೆ ಅದರ ಪಕ್ಕದಲ್ಲಿ ವಸ್ತುವಿನಿಂದ ನಮನಗೊಳಿಸಲ್ಪಟ್ಟ ಕಿರಣಗಳಿಂದ ಉಂಟಾಗುವ ಬಿಂಬವೂ ಮೂಡುತ್ತದೆ. ಇವೆರಡು ಬಿಂಬಗಳಿಂದ ಹೊರಟ ಬೆಳಕಿನ ಅಲೆಗಳು ನೇತ್ರಮಸೂರದಲ್ಲಿ (ಐ ಪೀಸ್) ಪರಸ್ಪರ ಮಿಶ್ರಣಗೊಂಡು ವಸ್ತುವಿನ ಬಿಂಬ ಉಂಟಾಗುತ್ತದೆ. ವಸ್ತು ಅಷ್ಟೇನೂ ಪಾರದರ್ಶಕ ಅಲ್ಲದಿದ್ದಾಗ ಉಂಟಾಗುವ ಪರಿಸ್ಥಿತಿಯನ್ನು ಚಿತ್ರದಲ್ಲಿ ಸದಿಶೀಯವಾಗಿ (ವೆಕ್ಟೋರಿಯಲ್ಲಿ) ತೋರಿಸಲಾಗಿದೆ. 

ಚಿತ್ರ-1

ನೇರವಾಗಿ ಬರುವ ಅಲೆಯ ಪಾರವನ್ನು (ಆ್ಯಂಪ್ಲಿಟ್ಯೂಡ್) ಔಂ ಯೂ ವಸ್ತುವಿನ ಬಿಂಬದಲ್ಲಿರುವ ಅಲೆಯ ಪಾರವನ್ನು ಔI ಯೂ ಸೂಚಿಸಿದರೆ ಆಗ ಸೂಕ್ಷ್ಮ ವಸ್ತುವಿನಿಂದ ನಮನಗೊಳಿಸಲ್ಪಟ್ಟ ಅಲೆಯ ಪಾರವನ್ನು ಔಃ ಯೂ ಸೂಚಿಸುತ್ತದೆ. ಎಂದರೆ ಪಾರದರ್ಶಕವಲ್ಲದ ವಸ್ತುವಿನಿಂದ ನಮನಗೊಳಿಸಲ್ಪಟ್ಟ ಅಲೆಗಳ ಮತ್ತು ನೇರವಾಗಿ ಬರುವ ಅಲೆಗಳ ಮಧ್ಯೆ 180o ಪ್ರಾವಸ್ಥಾಂತರವಿರುತ್ತದೆ. (ಇವನ್ನು ವಿರುದ್ದ ದಿಶೆಗಳಲ್ಲಿರುವ ಬಾಣಗಳಿಂದ ಗುರುತಿಸಿದೆ). ಇಂಥ ವಸ್ತುಗಳಿಗೆ ಪಾರ ವಸ್ತುಗಳು (ಆ್ಯಂಪ್ಲಿಟ್ಯೂಡ್ ಆಬ್ಜಕ್ಟ್ಸ್) ಎಂದು ಹೆಸರು.

	ಈಗ ಒಂದು ಜೀವಕೋಶವನ್ನು ಸೂಕ್ಷ್ಮ ದರ್ಶಕದಲ್ಲಿ ಪರೀಕ್ಷಿಸುತ್ತಿದ್ದೇವೆಂದು ಭಾವಿಸೋಣ. ಇದರಲ್ಲಿರುವ ಎಲ್ಲ ಭಾಗಗಳೂ ಪಾರದರ್ಶಕವಾದ ವಸ್ತುವಿನಿಂದ ಕೂಡಿವೆ. ಅವುಗಳ ರಿಫ್ರೇಕ್ಷಣಾಂಕದಲ್ಲಿ ಅಥವಾ ಆಳದಲ್ಲಿ ಮಾತ್ರ ಅಲ್ಪಸ್ವಲ್ಪ ವ್ಯತ್ಯಾಸಗಳಿರುತ್ತವೆ. ಮೇಲೆ ವಿವರಿಸಿದ ರೀತಿಯಲ್ಲಿ ವಿಚಾರ ಮಾಡಿದರೆ ಸೂಕ್ಷ್ಮ ದರ್ಶಕದಲ್ಲಿ ಮೂಡುವ ಬಿಂಬದಲ್ಲಿರುವ ಪಾರ (ಔI) ನೇರವಾದ ಬೆಳಕಿನ (ಔಂ) ಎದ್ದು ಅದರ ಪ್ರಾವಸ್ಥೆ ಮಾತ್ರ ವ್ಯತ್ಯಾಸವಾಗಿರುತ್ತದೆ. (ಎಂದರೆ ಚಿತ್ರದಲ್ಲಿ ತೋರಿಸುವಂತೆ ಔಂ ಮತ್ತು ಔIಗಳ ಮಧ್ಯೆ ಒಂದು ನಿರ್ದಿಷ್ಟ ಕೋನವಿರುತ್ತದೆ). 

ಚಿತ್ರ-2

ಔಂ ಮತ್ತು ಔI ಗಳ ಪರಿಮಾಣ ಒಂದೇ ಆಗಿರುವುದರಿಂದ ನಮ್ಮ ಕಣ್ಣು ವಸ್ತುವಿನ ಬಿಂಬವನ್ನು ಹಿನ್ನೆಲೆಯಿಂದ ಬೇರೆಯಾಗಿ ಗುರುತಿಸುವುದಿಲ್ಲ. ಇಂಥ ವಸ್ತುಗಳಿಗೆ ಪ್ರಾವಸ್ಥಾವಸ್ತುಗಳೆಂದು ಹೆಸರು. ಇವು ದೃಷ್ಟಿಗೆ ಗೋಚರವಾಗಬೇಕಾದರೆ ಇವನ್ನು ಅಷ್ಟು ಪಾರದರ್ಶಕವಲ್ಲದ ಮತ್ತೊಂದು ವಸ್ತುವಿನಿಂದ ಕರೆಗೊಳಿಸಬೇಕು (ಸ್ಟೇನ್). ಹೀಗೆ ಮಾಡಿದಾಗ ಜೀವಕೋಶವೇ ಪಾರವಸ್ತುವಾಗಿ ಮಾರ್ಪಟ್ಟು ಗೋಚರವಾಗುತ್ತದೆ ಆದರೆ ಸಾಮಾನ್ಯವಾಗಿ ಆಗ ಅದರ ಜೀವವೇ ಇಲ್ಲದಂತಾಗುತ್ತದೆ.

	ಈಗ ಮತ್ತೆ ಚಿತ್ರವನ್ನು ನೋಡಿದರೆ, ಪಾರದರ್ಶಕ ವಸ್ತುವಿನಿಂದ ನಮನಗೊಳಿಸಲ್ಪಟ್ಟ ಅಲೆಗಳನ್ನು ಔಃ ಯಿಂದ ಗುರುತಿಸಬೇಕು. ಎಂದರೆ, ಈ ಅಲೆಗಳು ಮತ್ತು ನೇರವಾಗಿ ಬಂದ ಅಲೆಗಳ (ಔಂ) ಮಧ್ಯೆ ಸುಮಾರು 90( ಪ್ರಾವಸ್ಥಾಂತರವಿರುವುದು. ಈ ವಿಷಯವನ್ನು ಮೊತ್ತಮೊದಲು ನಿಖರವಾಗಿ ಮನಗಂಡ ವಿe್ಞÁನಿ ಜೆರ್ನೈಕ್. ಈ ಮೊದಲೇ ಹೇಳಿದಂತೆ ವಸ್ತುಮಸೂರದ ಹಿಂಬದಿಯಲ್ಲಿ ಮೂಡುವ ಬಿಂಬಗಳಲ್ಲಿ ನೇರ ಅಲೆಗಳೂ ವಸ್ತುವಿನಿಂದ ನಮನಗೊಳಿಸಲ್ಪಟ್ಟ ಅಲೆಗಳೂ ಬೇರ್ಪಟ್ಟಿರುತ್ತವೆ. ಈಗ ನೇರವಾದ ಅಲೆಗಳಲ್ಲಿ ಮಾತ್ರ 90( ಪ್ರಾವಸ್ಥಾ ವ್ಯತ್ಯಾಸವನ್ನು ಉಂಟುಮಾಡುವ ಚತುರ್ಥಕ ಅಲೆ ಫಲಕವೊಂದನ್ನು (ಕ್ವಾರ್ಟರ್ ವೇವ್ ಪ್ಲೇಟ್) ಈ ಜಾಗದಲ್ಲಿಟ್ಟರೆ ನೇತ್ರಮಸೂರದಲ್ಲಿ ಉಂಟಾಗುವ ಬಿಂಬದಲ್ಲಿರುವ ಅಲೆಗಳ ವಿತರಣೆ ಚಿತ್ರದಲ್ಲಿ ತೋರಿಸಿರುವಂತೆ ಇರುವುದು.

ಚಿತ್ರ-3

 ಈಗ ನೇರ ಅಲೆಗಳ ಪಾರವನ್ನು ಔಂ( ಯೂ ಸೂಚಿಸುವುದರಿಂದ ವಸ್ತುವಿನ ಬಿಂಬದಲ್ಲಿರುವ ಅಲೆಗಳ ಪಾರವನ್ನು ಔI( ನಿಂದ ಗುರುತಿಸಬಹುದು. ಇದು ಔಂ( ಗಿಂತ ಸಾಕಷ್ಟು ಕಡಿಮೆ ಇರುವುದರಿಂದ ಈ ಬಿಂಬ ಕಣ್ಣಿಗೆ ಒಡನೆ ಗೋಚರವಾಗುತ್ತದೆ. ಎಂದರೆ ಈ ವಿಧಾನದಲ್ಲಿ ಪ್ರಾವಸ್ಥಾ ವ್ಯತ್ಯಾಸವನ್ನು ಪಾರದ ವ್ಯತ್ಯಾಸವನ್ನಾಗಿ ಮಾರ್ಪಡಿಸಿ ಈಗ ಹಿನ್ನೆಲೆಯೊಡನೆ ಉಂಟಾಗುವ ವೈದೃಶ್ಯದಿಂದ ವಸ್ತುವಿನ ಬಿಂಬ ಗೋಚರವಾಗುವಂತೆ ಮಾಡುವುದರಿಂದ ಇದನ್ನು ಪ್ರಾವಸ್ಥಾ ವೈದೃಶ್ಯ ವಿಧಾನವೆಂದು ಬಣ್ಣಿಸಲಾಗಿದೆ. ಜೀವವಿe್ಞÁನದಲ್ಲಿ ಇದರ ಉಪಯೋಗ ಸ್ವಯಂ ವೇದ್ಯ. ಈ ತತ್ತ್ವವನ್ನು ಸ್ಪಷ್ಟವಾಗಿ ಮನಗಂಡದ್ದೇ ಅಲ್ಲದೆ ವಾಸ್ತವವಾಗಿ ಪ್ರಯೋಗಿಸಿ ತೋರಿಸಿದ ಕೀರ್ತಿ ಜೆರ್ನೈಕ್‍ನಿಗೆ ಸಲ್ಲುತ್ತದೆ. ರಾಯಲ್ ಸೊಸೈಟಿಯ ರಮ್‍ಫೋರ್ಡ್ ಪದಕ (1952) ಮೊದಲಾದ ಅನೇಕ ಪ್ರಶಸ್ತಿಗಳು ಈತನಿಗೆ ದೊರೆತವು. ಈತ 1996 ರ ಮಾರ್ಚ್ 10ರಂದು ಕಾಲವಶನಾದ.
(ಎನ್.ವಿ.ಎಂ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ